TOP    Fugaku    Major Achievements    2020-21 COVID-19 Projects    "COVID-19: Wear Mask & Ventilate" said Fugaku (ಕನ್ನಡ Kannada)

Available in multiple languages!
R-CCS researchers and their friends have translated into their native languages.



COVID-19: Wear Mask & Ventilate said Fugaku

"COVID-19: ಮಾಸ್ಕ್ ಧರಿಸಿ, ವಾತಾಯನ ವ್ಯವಸ್ಥೆ ಬಳಸಿ" ಎಂದು ಹೇಳಿತು ಫುಗಾಕು

ಸಾರಾಂಶ


ಸೂಪರ್ ಕಂಪ್ಯೂಟರ್ FUGAKU@RIKEN R-CCS ಪ್ರಸ್ತುತ ವಿಶ್ವದ ಅತಿ ವೇಗದ ಸೂಪರ್ ಕಂಪ್ಯೂಟರ್ ಆಗಿದ್ದು, ವಿವಿಧ COVID-19 ತಡೆಗಟ್ಟುವ ಕ್ರಮಗಳಿಗಾಗಿ ಇದನ್ನು ಮುಂಚಿತವಾಗಿ ನಿಯೋಜಿಸಲಾಗಿದೆ.

Related Links:
Japan's Fugaku retains title as world's fastest supercomputerThe webpage will open in a new tab. (RIKEN Website)
Supercomputer Fugaku will be used to help fight against COVID-19

fugaku

ಫುಗಾಕು ಮೂಲಕ ನೆಡೆದಿರುವ ಸೋಂಶೋಧನಗಳಲ್ಲಿ ಹನಿ ಹಾಗು ಏರೋಸಾಲ್ಗಳಿಂದ COVID-೧೯ನಿನ ಹರಡುವಿಕೆಯ ವಿವರವಾದ ಸಿಮ್ಯುಲೇಶನ್ ಕೂಡ ಒಂದು. ಈ ಸಿಮ್ಯುಲೇಶನ್ ಗಳಲ್ಲಿ ಮಾಸ್ಕ ಮತ್ತು ಮುಖ ಗುರಾಣಿಗಳ ವಿವರವಾದ ಅಧ್ಯಯನಗಳು, ಹನಿಗಳು ಮತ್ತು ಏರೋಸಾಲ್ ಗಳು ಹೇಗೆ ಹರಡಬಹುದು ಹಾಗು ಕಚೇರಿಗಳು, ತರಗತಿ ಕೊಠಡಿಗಳು, ರೆಸ್ಟೋ ರೆಂಟ್ ಗಳು, ಚಿತ್ರಮಂದಿರಗಳು ಮತ್ತು ವಿಮಾನಗಳಂತಹ ಸಾರ್ವಜನಿಕ ಮತ್ತು ಸಾಮಾಜಿಕ ಸಂದರ್ಭಗಳಲ್ಲಿ ಹನಿಗಳ ಹರಡುವಿಕೆಯನ್ನು ಹೇಗೆ ತಗ್ಗಿಸಬಹುದು ಎಂಬ ಅಧ್ಯಯನಗಳು ಒಂದಾಗಿವೆ . ಡಾ. / ಪ್ರೋ ಫ್. ಮಕೊತೊ ತ್ಸುಬೊಕುರ ರವರ (ರೀಕೆನ್ ಆರ್-ಸಿಸಿಎಸ್ ಮತ್ತು ಕೋಬೆ ವಿಶ್ವವಿದ್ಯಾಲಯ) ನೇತೃತ್ವದ ಯೋಜನೆಯಲ್ಲಿ ನಾವು ಕಂಡುಕೊಂಡದ್ದು ಎಲ್ಲರಿಗೂ ತಿಳಿದಿರುವ ವಿಷಯವಾದರೂ ಈಗ ಸರಿಯಾದ ವೈಜ್ಞಾನಿಕ ಸಿಮ್ಯುಲೇಶನ್ ನಿಂದ ಬೆಂಬಲಿತವಾಗಿದೆ- "ಮಾಸ್ಕ್ ಧರಿಸಿ, ವಾತಾಯನ ವ್ಯವಸ್ಥೆ ಬಳಸಿ":

ರಕ್ಷಣಾತ್ಮಕ ಉಡುಗೆ ಇಲ್ಲದೆ, ಉದಾ. ಮಾಸ್ಕ್ ಮತ್ತು ಮುಖದ ಗುರಾಣಿಗಳು, ದೊಡ್ಡ ಪ್ರಮಾಣದಲ್ಲಿ ವೈರಸ್ ತುಂಬಿದ ಹನಿಗಳು ಮತ್ತು ಏರೋಸಾಲ್ ಗಳು ಬಾಯಿ ಮತ್ತು ಮೂಗಿನಿಂದ ಹರಡುತ್ತವೆ; ಕೆಮ್ಮು ಮತ್ತು ಸೀನುಗಳಲ್ಲಿ ಮಾತ್ರವಲ್ಲದೆ, ಸಾಮಾನ್ಯ ಸಂಭಾಷಣೆಯ ಮೂಲಕವೂ ಹನಿಗಳು ಹರಡುತ್ತವೆ (20 ನಿಮಿಷಗಳ ಸಂಭಾಷಣೆ = ಒಂದು ಕೆಮ್ಮು).

ಇದಲ್ಲದೆ, ಮೈಕ್ರೊಮೀಟರ್ ಹನಿಗಳಾಗಿರುವ ಏರೋಸಾಲ್ ಗಳು ಗಂಟೆಗಟ್ಟಲೆ ವಾಯುಗಾಮಿಯಗಿರಬಹುದು. ಇವು, ಪ್ರಮಾಣಿತ ಎರಡು ಮೆಟರ್ ಸಾಮಾಜಿಕ ಅಂತರವನ್ನು ಮೀರಿ ಬಹಳ ದೂರ ಹರಡುತ್ತವೆ.

ಮಾಸ್ಕ್ಗ ಳು ಪರಿಣಾಮಕಾರಿಯಾಗಿದ್ದು, ಹಾಗು ಮುಖದ ಗುರಾಣಿಗಳು ಕೂಡ (1) ಹನಿ ಮತ್ತು ಏರೋಸಾಲ್ ಗಳ ಹರಡುವಿಕೆಯನ್ನು ತಡೆಯುವುದರಲ್ಲಿ ಸ್ವಲ್ಪ ಪರಿಣಾಮಕಾರಿ. (2) ಮಾಸ್ಕ್ಗ ಳು ಹನಿಗಳನ್ನು ಉಸಿರಾಟದ ಮೂಲಕ ಸ್ವಾಶಕೊಶದೊಳಹೋಗುವುದನ್ನು ಸ್ವಲ್ಪ ಮಟ್ಟಿಗೆ ತಡೆಯುತ್ತವೆ.

ಮಾಸ್ಕ್ ಮತ್ತು ಮುಖದ ಗುರಾಣಿಗಳ ಬಳಕೆ ಮಾಡಿದರೂ, ನಿರ್ದಿಷ್ಟ ಪ್ರಮಾಣದ ವೈರಲ್ ಏರೋಸಾಲpಳು ಮಾಸ್ಕಿನ ಮೈಕ್ರೊಮಿಟರ್ ಸಂದಿಗಳ ಮೂಲಕ ಅಥವಾ ಹುರಣಿ ಮತ್ತು ಮುಖದ ನಡುವಿನ ಅಂತರದಿಂದ ಮೂಲಕ ಹರಡಿ ದೀರ್ಘಕಾಲ ಗಾಳಿಯನ್ನು ಕಲುಷಿತಗೊಳಿಸುತ್ತವೆ. ಹೀಗಾಗಿ, ವಾತಾಯನವೂ ವ್ಯವಸ್ತೆಯೂ ಮುಖ್ಯವಾಗುತ್ತದೆ.

ಆಧುನಿಕ ಕಟ್ಟಡಗಳಲ್ಲಿ ಯಾಂತ್ರಿಕ ವಾತಾಯನದ ವ್ಯವಸ್ಥೆ ಇರುವುದರಿಂದ ಏರೋಸಾಲpಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುಬಹುದು. ಆಧುನಿಕ ಒಳಾಂ ಗಣ ಸೌಲಭ್ಯಗಳಾದ ಕ್ರೀ ಡಾಂಗಣಗಳು, ಚಿತ್ರಮಂದಿರಗಳು ಹಾಗು ರೈಲು ಮತ್ತು ವಿಮಾನಗಳಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಿಗೂ ಇದು ನಿಜ. ಈಂಂತಹ ಪರಿಸರದಲ್ಲಿ ಪ್ರತಿಯೊಬ್ಬರೂ ಮಸ್ಕ್ ಧರಿಸಿದರೆ COVID-19ನಿನ ಪ್ರಸರಣದ ಅವಕಾಶ ಕಡಿಮೆ ಇರುತ್ತದೆ.

ಆದಾಗ್ಯೂ, ಅನೇಕ ಸ್ಥಳಗಳಲ್ಲಿ ಸರಿಯಾದ ವಾತಾಯನದ ಕೊರತೆ ಇರಬಹುದು, ವಿಶೇಷವಾಗಿ ಹಳೆಯ ಕಟ್ಟಡಗಳಲ್ಲಿ ಶಾಲೆಗಳಲ್ಲಿ, ಧಾರ್ಮಿಕ ಕಟ್ಟಡಗಳಲ್ಲಿ, ರೆಸ್ಟೋ ರೆಂಟ್ ಗಳಲ್ಲಿ, ಹೆರಿಗೆ ಆಸ್ಪತ್ರೆಗಳಲ್ಲಿ ಮತ್ತು ಖಾಸಗಿ ನಿವಾಸಗಳಲ್ಲಿ ವಾತಯನದ ಕೊರತೆ ಇರಬಹುದು. ಇಂತಹ ಸ್ಥಳಗಳಲ್ಲಿ, ಮಾಸ್ಕ್ ಹಾಕುವುದರ ಜೊತೆಗೆ, ಸಕ್ರಿಯವಾಗಿ ವಾತಾಯನವನ್ನು ಮಾಡುವುದು ಅವಶ್ಯಕ. ಅಭಿಮುಖ ಮೂಲೆಗಳಲ್ಲಿರುವ ಕಿಟಕಿ, ಬಾಗಿಲು ಇತ್ಯಾದಿಗಳನ್ನು, ಏಸಿ ಬಳಸುತಿದ್ದರು ಅಥವ ಬಳಸುತ್ತಿಲ್ಲದ್ದಿದ್ದರು, ತೆರೆಯುವುದರ ಮೂಲಕ ಕೊಟಢಿ ಕೋಣೆಗಳಲ್ಲಿ ವಾತಯನವಾಗಿಸಬಹುದು.

COVID-19ನನ್ನು ಸೋಲಿಸಲು ಲಸಿಕೆಗಳು ಮತ್ತು ಚಿಕಿತ್ಸಕಗಳು ಎಷ್ಟು ಮುಖ್ಯವೋ, ನೈರ್ಮಲ್ಯೀ ಕರಣ, ಮಾಸ್ಕ್ ಮತ್ತು ವಾತಾಯನವನ್ನು ಆಧರಿಸಿದ COVID ಸೊಂಕು ತಡೆಗಟ್ಟುವ ಕ್ರಮಗಳೂ ಅಷ್ಟೇ ಮುಖ್ಯ. ಈ ಹೊತ್ತಿನಲ್ಲಿ, ಲಸಿಕೆಗಳು ಮತ್ತು ಔಷಧಿಗಳಿಗಾಗಿ ಜಗತ್ತು ಕುತೂಹಲದಿಂದ ಕಾಯುತ್ತಿರುವಾಗ, ಕೆಲವು ದೇಶಗಳು ಮೇಲಿನ ಶೀರ್ಷಿಕೆಯ ಕ್ರಮಗಳ ವ್ಯಾಪಕ ಅನ್ವಯಿಕೆಗಳೊಂದಿಗೆ COVID-19ನನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿವೆ.